Re: [Wikikn-l (kannada wikipedia)] ಭಾಷಾಂ ತರ
ಈಗಾಗಲೆ ಬಳಿಸಲಾಗಿರುವ ಪದಗಳ ಧಾಟಿಗೆ ಹೊಂದುವಂತೆ
ALUವನ್ನು "ಗಣಕ", "ಗಣಕ ಘಟಕ", "ನಿರ್ಮಾಣ ಘಟಕ"
ಎಂದು ಮುಂತಾಗಿಯೂ,
Control Unitಅನ್ನು "ನಿಯಂತ್ರಕ", "ನಿಯಂತ್ರಣ ಘಟಕ",
"ನಿಯಾಮಕ" ಎಂದು ಮುಂತಾಗಿಯೂ
ಭಾಷಾಂತರಿಸಬಹುದು. ಆಲ್ಲದೆ, "ಸಂಗ್ರಹಣ
ಘಟಕ"ವನ್ನು "ಸಂಗ್ರಾಹಕ"ಕ್ಕೆ ಮಾರ್ಪಡಿಸಿದರೆ
ಚೆನ್ನ ಎನ್ನಿಸುತ್ತೆ. ಅಪ್ಪಟ
ಕನ್ನಡವನ್ನೆ ಬಳಸಬೇಕು ಎನ್ನುವ ವ್ರತ ಇಲ್ಲದಿದ್ದರೆ
"ಆರಂಭಕ", "ನಿವೇಶಕ"ಗಳನ್ನೂ ತೂಗಿನೋಡಬಹುದು.
ಏನಂತೀರಿ?
ವೆಂ.
On Sat, 26 Mar 2005 21:40:29 +0530, H P Nadig <hpnadig <at> pacific.net.in> wrote:
> ಎಲ್ಲರಿಗೂ ನಮಸ್ಕಾರ,
>
> ವಿಕಿಪೀಡಿಯಾದಲ್ಲಿ ಹಲವು ಹೊಸ
ಸಂಪಾದಕರನ್ನು ಕಾಣುತ್ತಿರುವುದು ಸಂತೋಷದ
> ವಿಷಯ. ವಾರದ ಸಹಯೋಗ ಸದ್ಯಕ್ಕೆ ಬೇರೆ
ಲೇಖನದೆಡೆಗೆ ನಡೆದಿಲ್ಲ.
ಸಾಧ್ಯವಾದಲ್ಲಿ ಏಪ್ರಿಲ್
> ನಲ್ಲಿ ಎರಡು ಸಹಯೋಗವಾದರೂ ನಡೆಸಲು ಪ್ರಯತ್ನಿಸೋಣ.
>
> ಈ ತಿಂಗಳು,
> ಗಣಕಯಂತ್ರ ದ ಬಗೆಗೆ ಸಚಿತ್ರ
ಲೇಖನವೊಂದನ್ನು ಬಸವರಾಜ ತಳವಾರರವರು
ಬರೆದಿದ್ದಾರೆ. ನಾಗಭೂಷಣ
> ಸ್ವಾಮಿಯವರು ಆದಿಕವಿ ಪಂಪನ ಬಗ್ಗೆ
ಬರೆದಿರುವರು. ಇಂತಹ ಲೇಖನಗಳು
ಅಭಿನಂದನಾರ್ಹ.
>
> ಹಾಗೆಯೇ ನಕ್ಷೆಗಳನ್ನು, ಚಿತ್ರಣಗಳನ್ನು
ಆಯಾ ಭಾಷೆಗಳಲ್ಲೇ ಇರಿಸುವ ವಿಕಿ
ಸಂಪ್ರದಾಯದಂತೆ
> http://kn.wikipedia.org/wiki/Image:ಗಣಕಯಂತ್ರದ ಘಟಕಗಳು.jpg
> ಚಿತ್ರವನ್ನು ಜಿಂಪ್ ಮುಖಾಂತರ
ಕನ್ನಡಕ್ಕೆ ಅವತರಣ ಮಾಡಿರುವೆ, ಆದರೆ
ಉಳಿದೆರಡು ಶಬ್ಧಗಳಿಗೆ
> ಕನ್ನಡ ಪದಗಳು ಸಿಗಲಿಲ್ಲ...
> ೧) Arithmetic Logic unit
> ೨) Control unit
> ನಿಮಗೆ ತಿಳಿದಿದ್ದಲ್ಲಿ ಕಳುಹಿಸಿ. :)
>
> - ಹರಿ ಪ್ರಸಾದ್ ನಾಡಿಗ್
>
> -
> http://www.hpnadig.net/ 'Tis the gift to be simple, 'tis the gift to be
> free, 'Tis the gift to come down where we ought to be, And when we find
> ourselves in the place just right, 'Twill be in the valley of love and
> delight. ~ Joseph Brackett ~
> _______________________________________________
> Wikikn-l mailing list
> Wikikn-l <at> Wikipedia.org
> http://mail.wikipedia.org/mailman/listinfo/wikikn-l
>
>
>
--
--
Nunc Tutus Exitus Computarus